ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ  ಒಂದು ವಾರ ಮೀನು ಮಾರ್ಕೆಟ್ ಹಾಗೂ  ತರಕಾರಿ ಅಂಗಡಿಗಳು ಸಂಪೂರ್ಣ ಬಂದ್

ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ಒಂದು ವಾರ ಮೀನು ಮಾರ್ಕೆಟ್ ಹಾಗೂ ತರಕಾರಿ ಅಂಗಡಿಗಳು ಸಂಪೂರ್ಣ ಬಂದ್

0 0
Read Time:1 Minute, 57 Second

ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಹರಡಿದ ಕೋವಿಡ್ ಕಂಟೈನ್ ಮೆಂಟ್ ಪ್ರದೇಶಗಳಾಗಿ ಇನ್ನಷ್ಟು ಪ್ರದೇಶಗಳು ಜೂಲಾಯಿ 10 ರಿಂದ 17 ರ ತನಕ ಸಂಪೂರ್ಣ ಬಂದ್ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 11 ಮಂದಿಗೆ ಸಂಪರ್ಕ ಮೂಲಕ ಕೋವಿಡ್ ಹರಡಿದೆ. ನಾಲ್ಕು ತರಕಾರಿ ಅಂಗಡಿ ಹಾಗೂ ಒಂದು ಜೀನಸು ಅಂಗಡಿ ಸೇರಿ 5 ಮಂದಿಗೆ ಕೋವಿಡ್ ಬಾಧಿಸಿದೆ.ಈ ಕಾರಣದಿಂದ ಜೂಲಾಯಿ 10 ರಿಂದ 17 ರ ತನಕ ಈ ಕೆಳಗಿನ ಪ್ರದೇಶಗಳ ಅಂಗಡಿಗಳನ್ನು ಸಂಪೂರ್ಣ ಮುಚ್ಚಬೇಕು ಎಂದು ಜಿಲ್ಲಾ ಕಲೆಕ್ಟರ್ ತಿಳಿಸಿರುತ್ತಾರೆ. ಕಂಟೈನ್ ಮೆಂಟ್ ಪ್ರದೇಶಗಳಿಂದ ಎಷ್ಟು ಮಂದಿಗೆ ಕೊರೋನ ಹರಡಿದೆ ಎಂಬುದನ್ನು ಕಂಡು ಹಿಡಿಯಲು ಹಾಗೂ ಇನ್ನು ಮುಂದೆ ಈ ಪ್ರದೇಶಗಳಿಂದ ಯಾರಿಗೂ ವೈರಸ್ ಬಾಧಿಸಬಾರದು ಎಂಬ ಉದ್ದೇಶದಿಂದ ಈ ಮುಂಜಾಗ್ರತೆಯ ಭಾಗವಾಗಿ ಈ ಆದೇಶ ಹೊರಡಿಸಲಾಗಿದೆ. ಶುಕ್ರವಾರ ಸಂಜೆ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಅಧಿಕಾರಿ, ಜಿಲ್ಲಾ ಮೆಡಿಕಲ್ ಆಫೀಸರ್ ಇವರುಗಳ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.➡️ಕಾಲಿಕಡವು ಫಿಶ್/ ವೆಜಿಟೇಬಲ್ ಮಾರ್ಕೆಟ್.➡️ಚೆರ್ಕಳ ಟೌನ್ ಪ್ರದೇಶ ➡️ಕಾಂಞಂಗಾಡ್ ಫಿಶ್/ವೆಜಿಟೇಬಲ್ ಮಾರ್ಕೆಟ್ ➡️ತೃಕ್ಕರಿಪುರ ಫಿಶ್/ಮಾಂಸ ಮಾರ್ಕೆಟ್➡️ ನೀಲೇಶ್ವರ ಪ್ರದೇಶ➡️ಕಾಸರಗೋಡು ಫಿಶ್/ ವೆಜಿಟೇಬಲ್ ಮಾರ್ಕೆಟ್ ➡️ಕುಂಬಳೆ ಫಿಶ್/ವೆಜಿಟೇಬಲ್ ಮಾರ್ಕೆಟ್ ➡️ಕುಂಜತ್ತೂರು, ಉಪ್ಪಳ ಫಿಶ್ ಮಾರ್ಕೆಟ್. ➡️ಉಪ್ಪಳ ಹನಾಫಿ ಬಝಾರ್ ತರಕಾರಿ ಮಾರ್ಕೆಟ್ ➡️ಮಜೀರ್ ಪಳ್ಳ ಮಾರ್ಕೆಟ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Leave a Reply

Your email address will not be published. Required fields are marked *

error: Content is protected !!