ಮಅದನಿ ವಿಷಯ: ರಾಜಕೀಯ ಮತ್ತು ಸಮುದಾಯದ ನಾಯಕತ್ವ ಮೌನ ಮುರಿಯಬೇಕು; ಪಿಡಿಪಿ

0 0
Read Time:2 Minute, 20 Second

ಮಅದನಿ ವಿಷಯ: ರಾಜಕೀಯ ಮತ್ತು ಸಮುದಾಯದ ನಾಯಕತ್ವ ಮೌನ ಮುರಿಯಬೇಕು; ಪಿಡಿಪಿ

ಕಾಸರಗೋಡ್ ಪಿಡಿಪಿ .ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಆಡಳಿತಾ ರೂಢ ಭಯೋತ್ಪಾದನೆಯ ವಿರುದ್ಧ ಜಾತ್ಯತೀತ ರಾಜಕೀಯ ನಾಯಕತ್ವ ಹಾಗೂ ಸಮುದಾಯ ಸಂಘಟನೆಗಳ ಮುಖಂಡರು ಮೌನ ಮುರಿಯಲು ಸಿದ್ಧರಾಗಬೇಕೆಂದು ಪಿಡಿಪಿ .ಅಧ್ಯಕ್ಷ ಎಸ್.ಎಂ.ಬಶೀರ್ ಹೇಳಿದರು.ಫ್ಯಾಸಿಸಂ ವಿರುದ್ಧ ಅಹಿಂದ ಕ್ಕೆ ಬೇಕಾಗಿ ತನ್ನ ನಾಲಿಗೆಯ ಮೂಲಕಹಾಗು ಫಾಸಿಸ್ಟ್ ವಿರುದ್ಧ ತೀಕ್ಷಣವಾಗಿ ಹೋರಾಡಿದ ಮದನಿಯವರನ್ನು ಇಲ್ಲವಾಗಿಸಲುಫ್ಯಾಸಿಸ್ಟ್ ಭಯೋತ್ಪಾದನೆಯೊಂದಿಗೆ ಕೈಜೋಡಿಸಿ ಹಲವಾರು ವರ್ಷಗಳ ಹಿಂದೆಯೇ ಮದನಿಯವರ ನಾಶಕ್ಕೆ ನಾಂದಿ ಹಾಡಿದ ಕಪಟ ಜಾತ್ಯತೀತ ವಾದಿಗಳನ್ನು ಕಾಲ ಕ್ಷಮಿಸುವುದಿಲ್ಲ , ಮದನಿ ವಿಚಾರದಲ್ಲಿ ಕೇರಳದ ಜಾತ್ಯತೀತ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವದ ನಿರಂತರ ಮೌನ ಅಪಾಯಕಾರಿಯಾಗಿದ್ದು, ಈ ಜಾಣ ಕುರುಡನ್ನುಜಾತ್ಯತೀತ ಕೇರಳ ಮನ್ನಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಹಲವು ವರ್ಷಗಳ ಹಿಂದೆ ಹುಸಿ ಸೆಕ್ಯುಲರಿಸಂನಿಂದ ಮದನಿ ಮತ್ತು ಅವರ್ನಾ ರಾಜಕೀಯ ಚಳವಳಿಯು ಮುಂದಿಟ್ಟ ಕಲ್ಪನೆಯನ್ನು ನಾಶಮಾಡಲು ಮೇಲ್ವರ್ಗದ ಫ್ಯಾಸಿಸಂನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾದ ಜಾತ್ಯತೀತ ಚಳವಳಿಗಳು ಮದನಿಯವರನ್ನು ಕಾರಾಗ್ರಹಕ್ಕೆ ದೂಡಲು ಸಹಕಾರಿಯಾಯಿತೇ ವಿನಃ ಅವರು ಮುಂದಿಟ್ಟ ಆಶಯಕ್ಕೆ ಮರಣವಿಲ್ಲ ಎಂಬುದು ಭಾರತದಲ್ಲೇ ಸಾಬೀತಾಗುತ್ತಿವೆ ಈ ನಿಟ್ಟಿನಲ್ಲಿ ರಾಜಕೀಯ , ಸಮುದಾಯ ಸಂಘಟನೆಗಳು, ಮಾಧ್ಯಮಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಎಲ್ಲಾ ಮಾನವ ಪ್ರೇಮಿಗಳು ಮದನಿಯವರಿಗೆ ಸಿಗಬೇಕಾದ ಅರ್ಹವಾದ ನ್ಯಾಯಕ್ಕಾಗಿ ಹೋರಾಡಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

Happy
Happy
0 %
Sad
Sad
100 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!