ಉಳ್ಳಾಲ: ಮುಡಿಪು ಚಿನ್ನದ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಸಾವಿರಾರು ರೂ.ಮೌಲ್ಯದ ಬೆಳ್ಳಿ ಸಾಮಾಗ್ರಿ ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ಬಳಿ ನಡೆದಿದೆ.ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿಯಲ್ಲಿ ಕಳವು ನಡೆದಿದೆ. ಕುರ್ನಾಡು ನಿವಾಸಿ ಇಬ್ರಾಹಿಂ ಮಾಲೀಕತ್ವದ ಅಂಗಡಿ ಇದಾಗಿದೆ. ಜ್ಯುವೆಲ್ಲರಿ ಅಂಗಡಿಯ ಎಡಭಾಗದ ಗೋಡೆಯನ್ನು ಕೊರೆದು ಕೃತ್ಯ ನಡೆದಿದೆ.ಕಳ್ಳರು ಗೋಡೆ ಕೊರೆದು ಒಳನುಗ್ಗುತ್ತಿದ್ದಂತೆ ಸೈರನ್ ಮೊಳಗಿದೆ. ಆದರೂ ಬೆಳ್ಳಿ ಸರವನ್ನು ಎಗರಿಸಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ಆಪ್ ಜ್ಯುವೆಲ್ಲರಿ ಮಾಲೀಕರ ಮೊಬೈಲಿನಲ್ಲಿ ಇದ್ದುದರಿಂದ ಮೊಬೈಲ್ ಮೂಲಕ ಸೈರನ್ ಗೋಚರಿಸಿದ್ದು, 10 ನಿಮಿಷಗಳಲ್ಲಿ ಜ್ಯುವೆಲ್ಲರಿ ಮಾಲೀಕರು ಅಂಗಡಿ ತಲುಪಿದ್ದರು. ಅಷ್ಟರಲ್ಲಾಗಲೇ ಆಗಂತುಕರು ಬೆಳ್ಳಿ ಸರದೊಂದಿಗೆ ಪರಾರಿಯಾಗಿದ್ದಾರೆಂದು ಕೊಣಾಜೆ ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ.

ಮುಡಿಪು “ಗೋಲ್ಡ್ ಕಿಂಗ್ ಜ್ಯುವೆಲ್ಲರಿ” ದರೋಡೆ; ಮಾಲೀಕನ ನೆರವಿಗೆ ಬಂತು ತಂತ್ರಜ್ಞಾನ
Read Time:1 Minute, 30 Second