ಉಪ್ಪಲಾ:
ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಯ ಬೇಡಿಕೆಯನ್ನು ಮುಂದಿಟ್ಟು ಮಂಗಳ್ಪಾಡಿ ಜನಕೀಯ ವೇದಿಕೆಯಿಂದ ಆರೋಗ್ಯ ಸಚಿವರಿಗೆ 10000 ಇಮೇಲ್‌ಗಳು ಕಳುಹಿಸಲಾಗುವುದು.
ಎಲ್ಲಾ ರೋಗಿಗಳಿಗೆ ಆಶ್ರಯವಾಗಿರಬೇಕಾದ ಕೇರಳದ ಉತ್ತರ ಕ್ಷೇತ್ರವಾದ ಮಂಜೇಶ್ವರದ ತಾಲೂಕು ಆಸ್ಪತ್ರೆಯ ಶೋಚನೀಯ ಸ್ಥಿತಿಯನ್ನು ಸೂಚಿಸಿ, ನೂತನ ಸಂಕೀರ್ಣ ಕಟ್ಟಡಗಳು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಲ್ಪಾಡಿ ಜನಕೀಯ ವೇದಿಕೆ ಪ್ರಾರಂಭಿಸಿದ ಆನ್‌ಲೈನ್ ಅಭಿಯಾನದಲ್ಲಿ ಅನೇಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕೈಜೋಡಿಸಿರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ಮಂಗಲ್ಪಾಡಿ ಜನಕೀಯ ವೇದಿಕೆಯ
ಕಾರ್ಯಕರ್ತರು ಆರೋಗ್ಯ ಸಚಿವರನ್ನು ಭೇಟಿಯಾಗಿ ಅರ್ಜಿಯನ್ನು ಹಸ್ತಾಂತರಿಸಿದರು. ಅಧಿಕಾರಿಗಳು ಕಣ್ಣು ತೆರೆಯುವವರೆಗೂ ಜನರು ಮತ್ತು ಎಂ.ಜಿ.ವಿ ಕಾರ್ಯಕರ್ತರು ಪ್ರತ್ಯೇಕ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಇದರ ಭಾಗವಾಗಿ ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರಿಗೆ 10000 ಇಮೇಲ್ ಮುಷ್ಕರ ಯೋಜನೆಯೊಂದಿಗೆ ಮುಂದೆ ಸಾಗುತ್ತಿದ್ದರೆ. ಕೋರೋನ ಕಾಲದಲ್ಲಿ ಚಿಕಿತ್ಸೆಯಿಲ್ಲದೆ 21 ಜೀವಗಳನ್ನು ಕಳೆದುಕೊಂಡಾಗ, ಕೋವಿಡ್ ಪ್ರೋಟೋಕೊಲ್ ಇದ್ದ ಕಾರಣ ಮಾತ್ರವಾಗಿತ್ತು ಇಲ್ಲಿ ಸಕ್ರಿಯವಾಗಿ ನಡೆಯಬೇಕಾದ ಮುಷ್ಕರವನ್ನು ಆನ್‌ಲೈನ್‌ನಲ್ಲಿ ಸೀಮಿತಗೊಳಿಸಿರುವುದು. ವಿವಿಧ ತಾಲೂಕುಗಳಲ್ಲಿ ಅನುಮತಿಸಿದ ತಾಲೂಕು ಆಸ್ಪತ್ರೆಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮೀರಿಸುವಂತೆ ಅಭಿವೃದ್ಧಿಪಡಿಸಿದಾಗ ಮಂಜೇಶ್ವರ ತಾಲೂಕು ಆಸ್ಪತ್ರೆಯು ಇಂದೂ ಪಿಎಚ್‌ಸಿ (ಪ್ರಾಥಮಿಕ ಆರೋಗ್ಯ ಕೇಂದ್ರ) ವ್ಯವಸ್ಥೆಗೆ ಸೀಮಿತವಾಗಿಯೇ ನೆಲೆನಿಂತಿದೆ.