ಮಂಜೇಶ್ವರ ಖಾಸಗಿ ವಲಯದಲ್ಲಿ ಕೈಗಾರಿಕೆ ಉದ್ಯಾನವನ ಬರಲಿದೆ

ಮಂಜೇಶ್ವರ ಖಾಸಗಿ ವಲಯದಲ್ಲಿ ಕೈಗಾರಿಕೆ ಉದ್ಯಾನವನ ಬರಲಿದೆ

1 0
Read Time:1 Minute, 28 Second

ಕಾಸರಗೋಡು: ಜಿಲ್ಲೆಯ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರವನ್ನು ಉನ್ನತ್ತಿಕರಿಸುವ ಉದ್ದೇಶದಿಂದ ಕಾಸರಗೋಡು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಖಾಸಗಿ ಸಹಭಾಗಿತ್ವದಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಅತ್ಯಾಧುನಿಕ ಕೈಗಾರಿಕಾ ಉದ್ಯಾನವನವನ್ನು ಸ್ಥಾಪಿಸುತ್ತಿದೆ.

ಈ ಉದ್ಯಾನವನವು ಕೃಷಿ ಮತ್ತು ಆಹಾರ ಸಂಸ್ಕರಣಾ ಘಟಕ ಮತ್ತು ಜವುಳಿ ಉದ್ಯಾನ ಜನರಲ್ ಎಂಜಿನಿಯರಿಂಗ್ ನಡುವಿನ ಜಂಟಿ ಉದ್ಯಮವಾಗಲಿದೆ.

60 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವ ಈ ಕೆೃಗಾರಿಕ ಉದ್ಯಾನವನಕ್ಕೆ ರಾಜ್ಯ ಕೈಗಾರಿಕಾ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ..

ಈ ಕೈಗಾರಿಕಾ ಉದ್ಯಾನದಲ್ಲಿ 650 ಕ್ಕೂ ಹೆಚ್ಚು ಜನರು ನೇರವಾಗಿ ಮತ್ತು 400 ಕ್ಕೂ ಹೆಚ್ಚು ಜನರು ಪರೋಕ್ಷವಾಗಿ ಉದ್ಯೋಗ ಪಡೆಯಲಿದ್ದಾರೆ.

ಈ ಉದ್ಯಾನವನವನ್ನು ಕಾಸರಗೋಡು ಚೇಂಬರ್ ಆಫ್ ಕಾಮರ್ಸ್ ರಚಿಸಿದ ಇಂಡಸ್ಟ್ರಿಯಲ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ.

ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಉನ್ನತಿಗೇರಿಸುವ ಉದ್ದೇಶದಿಂದ ಹೊಸ ಉದ್ಯಮವನ್ನು ಕೈಗೊಳ್ಳುತ್ತಿರುವ ಯುವಕರಿಗೆ ಈ ಉದ್ಯಾನವನವು ಉತ್ತಮ ವರದಾನವಾಗಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!