ಕೋವಿಡ್-19 ರ ವ್ಯಾಪಿಸುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ರೂಪೀಕರಿಸಲ್ಪಟ್ಟ ‘ಮಾಷ್’ ಯೋಜನೆಯ ಭಾಗವಾಗಿ ಮಂಗಲ್ಪಾಡಿ ಪಂಚಾಯತ್ ನಲ್ಲಿ ಕೋವಿಡ್ ಮಾನದಂಡಗಳನ್ನು ಸೂಕ್ತವಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಪರಿಶೋಧನೆಯನ್ನು ತೀವ್ರಗೊಳಿಸಲಾಗಿದೆ. ಈ ಬಗ್ಗೆ ಒಕ್ಟೊಬರ್ 7 ರಂದು ಉಪ್ಪಳ ಪೇಟೆಯಾದ್ಯಂತ ಮಾಷ್ ಯೋಜನೆಯ ಭಾಗವಾಗಿ ನಿಯೋಗಿಸಲ್ಪಟ್ಟ ಅಧ್ಯಾಪಕರು, ಪಂಚಾಯತ್ ಅಧಿಕೃತರು, ಆರೋಗ್ಯ ಕಾರ್ಯಕರ್ತರು, ಪೋಲೀಸ್ ಜಂಟಿಯಾಗಿ ಕಾರ್ಯಾಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಜೀನಸು ಅಂಗಡಿಗಳು, ಮೀನು ಮಾರುಕಟ್ಟೆ, ಹೋಟೆಲ್ , ಇತರ ವ್ಯಾಪಾರಸಂಸ್ಥೆಗಳಿಗೆ ತೆರಳಿ ಕಾರ್ಯಾಚರಿಸಲಾಯಿತು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಪಾಲನೆ, ಸಾನಿಟೈಸರ್, ರಿಜಿಸ್ಟರ್ ಗಳ ಉಪಯೋಗ ಎಂಬಿವುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೋವಿಡ್ ಪ್ರೋಟೋಕಾಲ್ ನ ಉಲ್ಲಂಘನೆಯು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ನೀಡಲಾಯಿತು. ಈ ಕಾರ್ಯಾಚರಣೆಯ ಮೂಲಕ ಕೋವಿಡ್ ವ್ಯಾಪಿಸುವಿಕೆ ಅನಿಯಂತ್ರಿತವಾಗಿ ಹೆಚ್ಚಾಗಿರುವುದರಿಂದ ಜನರು ಪಾಲಿಸಬೇಕಾದ ಮುನ್ನೆಚ್ಚರಿಕೆಯ ಕುರಿತಾದ ಸಂದೇಶವನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ವಾರ್ಡುಗಳನ್ನು ಕೇಂದ್ರೀಕರಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಗೂ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಅಧಿಕೃತರು ತಿಳಿಸಿರುತ್ತಾರೆ.
ಕಾರ್ಯಕ್ರಮದಲ್ಲಿ ಪಂಚಾಯತ್ ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಅಬ್ದುಲ್ ರಸಾಕ್, ಅಭಿವೃದ್ಧಿ ಸಮಿತಿ ಚೇರ್ಮೆನ್ ಶ್ರೀ ಬಿ.ಎಮ್ ಮುಸ್ತಫಾ, ಪಂಚಾಯತ್ ಸದಸ್ಯರಾದ ಶ್ರೀಮುಹಮ್ಮದ್ , ಶ್ರೀಮತಿ ಸುಜಾತ ಶೆಟ್ಟಿ , ಸಾಮಾಜಿಕ ಕಾರ್ಯಕರ್ತರಾದ ಶ್ರೀ ಅಝೀಂ ಮಣಿಮುಂಡ, ಶ್ರೀ ಕೆ.ಎಫ್ ಇಕ್ಬಾಲ್, ಮಂಜೇಶ್ವರ ಪೋಲೀಸ್ ಅಧಿಕಾರಿಗಳು , ಮಂಗಲ್ಪಾಡಿ ಜನಗೀಯ ವೇದಿ ಸಾರಥಿಗಲಾಧ ಅಬೂ ತಮಂ,ಝೈನುದ್ದೀನ್ ಅಡ್ಕ,ಸಾಲಿ ಸೀಗನ್ಡಿದಡಿ, ಪಂಚಾಯತ್ ಸೆಕ್ರೆಟರಿ ಇನ್ ಚಾರ್ಜ್ ಶ್ರೀಧನೇಷ್, ಆರೋಗ್ಯ ಕಾರ್ಯಕರ್ತರು, ಅಧ್ಯಾಪಕರಾದ ಶ್ರೀಇಸ್ಮಾಯಿಲ್, ಶ್ರೀಅಮೀರ್ ಕೋಡಿಬೈಲು, ಶ್ರೀಮೊಯ್ದೀನ್, ಶ್ರೀ ಪ್ರೇಮರಾಜನ್, ಶ್ರೀಬೆನ್ನಿ ತೋಪ್ಪುಂಪೊಯಿಲ್, ಶ್ರೀಬಶೀರ್ , ಶ್ರೀವಿಶ್ವನಾಥ, ಶ್ರೀ ಸತೀಶ್, ಶ್ರೀಸುರೇಂದ್ರ, ಶ್ರೀರಿಯಾಸ್, ಶ್ರೀ ಹರಿನಾಥ್, ಶ್ರೀಸತ್ಯ, ಶ್ರೀಆಸಿಫ್, ಶ್ರೀಸಂದೇಶ್ , ಶ್ರೀಪ್ರಜ್ವಲ್, ಶ್ರೀಮಧು, ಶ್ರೀ ಮೊಯ್ದು, ಶ್ರೀರಶೀದ್, ಮುಂತಾದವರು ಭಾಗವಹಿಸಿದ್ದರು.
ಕೋವಿಡ್-19 ರ ವ್ಯಾಪಿಸುವಿಕೆ: ‘ಮಾಷ್’ ಯೋಜನೆಯ ಭಾಗವಾಗಿ ಉಪ್ಪಳದಲ್ಲಿ ಕಾರ್ಯಾಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು
Read Time:3 Minute, 14 Second