Read Time:1 Minute, 13 Second
ಬೆಂಗಳೂರು: ನಾಳೆಯಿಂದ ಬೆಂಗಳೂರು ಅನ್ ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಚಿಕ್ಕಪೇಟೆ ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಸೀಲ್ ಡೌನ್ ಗೂ ಮೊದಲು ಚಿಕ್ಕಪೇಟೆಯಿಂದಲೇ ಹೆಚ್ಚು ಕೊರೊನಾ ಹರಡುತ್ತಿದೆ ಎನ್ನಲಾಗಿತ್ತು. ಆದರಿಂದ ಬಟ್ಟೆ ವ್ಯಾಪಾರಿಗಳ ಸಂಘ ಸೀಲ್ ಡೌನ್ ಗೆ ಅನುಮತಿ ಸೂಚಿಸಿ ತಮ್ಮೆಲ್ಲ ವ್ಯಾಪಾರ ವಹಿವಾಟುಗಳನ್ನ ನಿಲ್ಲಿಸಿತ್ತು. ಆದರೆ ಚಿಕ್ಕಪೇಟೆ ಸೀಲ್ ಡೌನ್ ಆದಮೇಲೂ ಸೋಂಕಿನ ಪ್ರಕರಣಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ.
ಹಾಗಾಗಿ ನಾಳೆಯಿಂದ ಬೆಂಗಳೂರು ಅನ್ ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ. ನಾವೂ ಸಹ ಸರ್ಕಾರದ ನಿಯಮಗಳನ್ನ ಪಾಲಿಸಿ ದೈನಂದಿನ ವ್ಯಾಪಾರ ಮಾಡುತ್ತೇವೆ ಎಂದು ಬೆಂಗಳೂರು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.