ಮಂಜೇಶ್ವರ:ಕೆ. ಪಿ.ಎಸ್. ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹಾಯಕ ಶಿಕ್ಷಣ ಅಧಿಕಾರಿ ಕೇಂದ್ರ ಮಂಜೇಶ್ವರ ಇಲ್ಲಿ ಧರಣಿ ಹಮ್ಮಿಕೊಳ್ಳಲಾಯಿತು. ಧರಣಿಯ ಉದ್ಘಾಟನೆಯನ್ನು ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಅಧ್ಯಕ್ಷರಾದ ಶ್ರೀ ಪಿ ಟಿ ಬೆನ್ನಿ ನೆರವೇರಿಸಿದರು ಸಾರ್ವಜನಿಕ ವಿದ್ಯಾಲಯಗಳ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಮತ್ತು ಮೊದಲೇ ಲಭಿಸಬೇಕಾದ ಸವಲತ್ತುಗಳನ್ನು ನೀಡುವುದು, ಅನಾಥರಾದ ಸಾವಿರದ ಏಳು ನೂರರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ನೇಮಕಾತಿ ನಡೆಸುವುದು ಮುಂತಾದ ಹಲವು ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಲಾಯಿತು. ರಾಜ್ಯದಾದ್ಯಂತ ಎಲ್ಲಾ ಶಿಕ್ಷಣಾಧಿಕಾರಿ ಕಚೇರಿಗಳ ಮುಂದೆ ಧರಣಿ ನಡೆಸುವುದರ ಭಾಗವಾಗಿ, ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು. ಉಪ ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಎಂ ಸ್ವಾಗತ, ಕೋಶಾಧಿಕಾರಿ ಶ್ರೀ ಜಬ್ಬಾರ್. ಬಿ. ಧನ್ಯವಾದವಿತ್ತರು. ಉಪಜಿಲ್ಲಾ ಅಧ್ಯಕ್ಷರಾದ ಶ್ರೀ ವಿಮಲ್ ಅಡಿಯೋಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಭಾಷಾ ಅಲ್ಪಸಂಖ್ಯಾತ ಸೆಲ್ ಕನ್ವೀನರ್ ಶ್ರೀನಿವಾಸ ಕೆ. ಯಚ್. ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಶ್ರೀ ವಸಂತಕುಮಾರ್ ಸಿ.ಕೆ ಮುಖ್ಯ ಅತಿಥಿಯಾಗಿದ್ದರು. ಶ್ರೀ ಸುರೇಂದ್ರನ್ ಚೀಮೇನಿ, ಶ್ರೀ ಜನಾರ್ಧನನ ಕೆ.ವಿ. ಶ್ರೀ ಮೂಸಕುಂಞ, ಶ್ರೀ ತಂಬಾನ್. ಎಂ. ಮೊದಲಾದವರು ಶುಭಾಶಂಸನೆಗೈದರು. ಹಿರಿಯ ನೇತಾರರಾದ ಶ್ರೀ ವಸಂತಕುಮಾರ್ ಸಿ ಕೆ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಕೆ.ಪಿ.ಎಸ್.ಟಿ.ಎ. ಯಿಂದ ಮಂಜೇಶ್ವರ ಎ. ಇ. ಒ ಕಚೇರಿ ಎದುರು ಧರಣಿ
Read Time:1 Minute, 55 Second


