ಮಂಜೇಶ್ವರ : ಕಡಂಬಾರು ಸರಕಾರಿ ಪ್ರೌಢ ಶಾಲೆಯಲ್ಲಿ 1 ಮತ್ತು 2 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕಲಿಕೋಪಕರಣ ವಿತರಣಾ ಸಮಾರಂಭ ಜರಗಿತು. ಸುಮಾರು 100 ಮಕ್ಕಳಿಗೆ ಶಾಲಾ ಶತಮಾನೋತ್ಸವ ಸಮಿತಿಯ ಕನ್ವೀನರ್ ಆದ ಶ್ರೀ ರಾಮಚಂದ್ರ ರಾವ್ ಹಾಗೂ ಕುಟುಂಬಸ್ಥರ ಕೊಡುಗೆಯಿಂದ ನೀಡಲಾದ ಕಲಿಕೋಪಕರಣಗಳ ವಿತರಣೆಯ ಉದ್ಘಾಟನೆ ಯನ್ನು ಸಾಂಕೇತಿಕವಾಗಿ ಸಮಾರಂಭದಲ್ಲಿ ನೆರವೇರಿಸಲಾಯಿತು. ಸಮಾರಂಭದ ಉದ್ಘಾಟನೆ ಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿಯಾದ ದಾನಿಗಳಾದ ಶ್ರೀ ರಾಮಚಂದ್ರ ರಾವ್ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಎಂ.ಸಿ ಚೇರ್ಮನ್ ಶ್ರೀ ಯದುನಂದನ ಆಚಾರ್ಯ ವಹಿಸಿದರು. ಪಿ. ಟಿ. ಎ ಅಧ್ಯಕ್ಷರಾದ ಶ್ರೀ ಮುತ್ತಲೀಬ್, ಮುಹಮ್ಮದ್ ಮುಸ್ತಫ, ನಿವೃತ್ತ ಅಧ್ಯಾಪಕ ಶ್ರೀ ವಿಜಯ ಕುಮಾರ್ ಎ , ಎಂ. ಪಿ. ಟಿ.ಎ ಅಧ್ಯಕ್ಷೆ ಝೌರ ಕಡಂಬಾರು, ಹಿರಿಯ ಅಧ್ಯಾಪಕರಾದ ಶ್ರೀ ಮೂಸಾ ಕುಂಞಿ.ಡಿ, ಶ್ರೀಮತಿ ಕನಕಂ ಟೀಚರ್ ಶುಭಾಶಂಸನೆಗೈದರು. ಸಭೆಯಲ್ಲಿ ಸ್ಟಾಫ್ ಸೆಕ್ರೆಟರಿ ಶ್ರೀ ಇಸ್ಮಾಯಿಲ್ ಎಂ ಸ್ವಾಗತಿಸಿ, ಶ್ರೀ ನಯನ ಪ್ರಸಾದ್ ಯಚ್.ಟಿ ವಂದಿಸಿದರು.

ಕಡಂಬಾರು ಶಾಲೆಯಲ್ಲಿ ಕಲಿಕೋಪಕರಣ ವಿತರಣೆ
Read Time:1 Minute, 39 Second