Read Time:1 Minute, 17 Second
ಉಪ್ಪಳ :ಮಂಗಲ್ಪಾಡಿ, ಉಪ್ಪಳ ಪ್ರದೇಶಗಳಲ್ಲಿ ಇರುವ ಅನೇಕ ಹಡಗು ಸಿಬ್ಬಂದಿ ಗಳಿಗೆ ಇನ್ನೂ ಮೊದಲ ಡೋಸ್ ಕೋವಿಡ್ ಲಸಿಕೆ ಲಭ್ಯ ವಾಗದ ಕಾರಣ ಕೆಲಸ ಕಳೆದುಕೊಳ್ಳುವ ಸ್ಥಿತಿ ಯಲ್ಲಿದ್ದಾರೆ. ಈಗಿರುವ ಹೊಸ ನಿಯಮ ದ ಪ್ರಕಾರ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿದವರಿಗೆ ಮಾತ್ರ ಹಡಗು ಉದ್ಯೋಗ ಕ್ಕೆ ಅನುಮತಿ ನೀಡುವುದು. ಆದರೆ ಜಿಲ್ಲೆಯ ಲ್ಲಿ ಹೆಚ್ಚಿನವರಿಗೆ ಕೋವಿಡ್ ಲಸಿಕೆ ಮೊದಲ ಡೋಸೇ ಲಭ್ಯವಾಗಿಲ್ಲ. ಈ ಕಾರಣ ದಿಂದ ಹಲವು ಹಡಗು ನೌಕರರು ಉದ್ಯೋಗ ಕಳೆದು ಕೊಳ್ಳುವ ಸ್ಥಿತಿ ಯಲ್ಲಿದ್ದಾರೆ, ಈ ಪರಿಸ್ಥಿತಿ ಯನ್ನು ಮನಗಂಡು ಆದಷ್ಟು ಬೇಗ ಜಿಲ್ಲೆಯ ಹಡಗು ನೌಕರರಿಗೆ ಆದ್ಯತೆ ಯ ಮೇರೆಗೆ ಎರಡು ಡೋಸ್ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಂಗಲ್ಪಾಡಿ ಜನಕೀಯ ವೇದಿಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಮಂತ್ರಿ ಶೈಲಜಾ ಟೀಚರ್, ಜಿಲ್ಲಾ ಉಸ್ತುವಾರಿ ಮಂತ್ರಿ ಇ ಚಂದ್ರ ಶೇಖರನ್ ಇವರಿಗೆ ಕಳುಹಿಸಿದ ಇ ಮೇಲ್ ಪತ್ರ ದಲ್ಲಿ ಮನವಿ ಮಾಡಿತು.