ಮಂಗಳೂರು ‘ತಮಾಮ್ ಫರ್ನಿಚರ್ ವರ್ಲ್ಡ್’ ಶುಭಾರಂಭ

0 0
Read Time:3 Minute, 4 Second

ಮಂಗಳೂರು ‘ತಮಾಮ್ ಫರ್ನಿಚರ್ ವರ್ಲ್ಡ್’ ಶುಭಾರಂಭ

ಮಂಗಳೂರು, ಜ.2: ಸ್ಪರ್ಧಾತ್ಮಕ ಗುಣಮಟ್ಟವನ್ನು ಹೊಂದಿರುವ ಪೀಠೋಪಕರಣಗಳ ಮಳಿಗೆ ‘ತಮಾಮ್ ಫರ್ನಿಚರ್ ವರ್ಲ್ಡ್’ ನಗರದ ಪಂಪ್ವೆಲ್ ನ ಸಿಟಿ ಗೇಟ್ ಬಿಲ್ಡಿಂಗ್ ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ಹಿಂದೂಸ್ತಾನ್ ಬಾವಾ ಬಿಲ್ಡರ್ಸ್ ನ ಆಡಳಿತ ನಿರ್ದೆಶಕ ಬಾವಾ ಅಬ್ದುಲ್ ಖಾದರ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ‘ತಮಾಮ್’ ಸಂಸ್ಥೆಯು ಪೀಠೋಪಕರಣ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಉಪ್ಪಳ, ಬಂದ್ಯೋಡ್, ಉದ್ಯಾವರದಲ್ಲಿ ಈಗಾಗಲೇ ಮಳಿಗೆಯನ್ನು ಹೊಂದಿರುವ ‘ತಮಾಮ್’ ಫರ್ನಿಚರ್ ವರ್ಲ್ಡ್ ಹೊಸ ವರ್ಷದ ಪ್ರಥಮ ದಿನದಂದೇ ಮಂಗಳೂರಿನಲ್ಲಿ ಮಳಿಗೆ ತೆರೆಯುವ ಮೂಲಕ ಹೊಸ ಶುಭ ಸೂಚನೆ ನೀಡಿದೆ. ಇದರ ಪಾಲುದಾರ ಅಬೂ ತಮಾಮ್ ಒಬ್ಬ ಯಶಸ್ವಿ ಉದ್ಯಮಿ ಮಾತ್ರವಲ್ಲ, ಸಮಾಜ ಸೇವಕರೂ ಹೌದು. ಕೋವಿಡ್ ಸಂದರ್ಭ ಅವರ ಸಮಾಜ ಸೇವೆಯನ್ನು ಜನರು ಈಗಲೂ ನೆನಪಿಸುತ್ತಿದ್ದಾರೆ. ಅವರ ಪಾಲುದಾರಿಕೆಯ ಈ ಮಳಿಗೆಯು ಯಶಸ್ಸು ಸಾಧಿಸಲಿ’ ಶುಭ ಹಾರೈಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರು ಸ್ಮಾರ್ಟ್ ಆಗುತ್ತಿರುವಾಗ ಪೀಠೋಪಕರಣಗಳ ಇಂತಹ ಸ್ಮಾರ್ಟ್ ಮಳಿಗೆಗಳು ನಗರದ ಸೌಂದರ್ಯ ಹೆಚ್ಚಿಸುತ್ತಿವೆ. ಉತ್ತಮ ಗುಣಮಟ್ಟದ, ವಿನ್ಯಾಸದ ಪೀಠೋಪಕರಣಗಳನ್ನು ಮಿತದರದಲ್ಲಿ ನೀಡುವ ಮೂಲಕ ಗ್ರಾಹಕರ ಮನ ಗೆಲ್ಲಲಿ ಎಂದು ಹಾರೈಸಿದರು.

ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ.ನೆಲ್ಸನ್ ಧೀರಜ್ ಪಾಯಿಸ್ ಮತ್ತು ನಗರದ ಪಂಪ್ ವೆಲ್ ತಖ್ವಾ ಮಸ್ಜಿದ್ ಖತೀಬ್ ಯಾಸಿರ್ ಸಖಾಫಿ ಅಲ್ ಅಝ್ಹರಿ ಶುಭ ಹಾರೈಸಿದರು.

ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗರೋಡಿ, ಗೋಲ್ಡ್ ಕಿಂಗ್ ಫ್ಯಾಶನ್ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕ ಮುಹಮ್ಮದ್ ಹನೀಫ್, ದ.ಕ. ಜಿಲ್ಲಾ ವಕ್ಫೃ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಮಂಗಳೂರು ಲೇಡಿಸ್ ಕ್ಲಬ್ ನ ಕಾರ್ಯದರ್ಶಿ ಜಿನೆಟಾ ಡಿಸೋಜ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ‘ತಮಾಮ್ ಫರ್ನಿಚರ್ ವರ್ಲ್ಡ್’ನ ಪಾಲುದಾರರಾದ ಅಬೂ ತಮಾಮ್, ರಫೀಕ್ ಕೃಷ್ಣಾಪುರ ಮತ್ತು ಉಪ್ಪಳ, ಬಂದ್ಯೋಡ್, ಉದ್ಯಾವರ ಮಳಿಗೆಗಳ ಪಾಲುದಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!