ಮಕ್ಕಳನ್ನು ಅಪಹರಿಸುವ ತಂಡ ಜಿಲ್ಲೆಯಲ್ಲಿ ಸಜೀವ ಅಧಿಕೃತರ ಅನಾಸ್ತೆ ಆತಂಕಕಾರಿ; ಪಿಡಿಪಿ

ಕಾಸರಗೋಡು: ಜಿಲ್ಲೆಯಾದ್ಯಂತ ಮಕ್ಕಳನ್ನು ಅಪಹರಿಸುವ ತಂಡವು ಬಯದ ವಾತಾವರಣವನ್ನು ಸೃಷ್ಟಿ ಸಿರುವಾಗ ಪೊಲೀಸರ ನಿಷ್ಕ್ರಿಯತೆ ಯು ಆತಂಕಕಾರಿ ಬೆಳವಣಿಗೆಯಾಗಿದೆ ಮಕ್ಕಳನ್ನು ಅಪಹರಿಸಿ ಅಪಾಯಗೊಳಿಸುತ್ತಿರುವ ತಂಡಗಳು ಅದರಲ್ಲೂ ಅನ್ಯ ರಾಜ್ಯ ಕೆಲಸಗಾರರು ಈ ಕುಕ್ರ್ಥ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬುದಾಗಿ ವ್ಯಾಪಕ ಆರೋಪವಿದೆ ಮಕ್ಕಳ ಸಮಾಜ ಕಲ್ಯಾಣ ಇಲಾಖೆಯಾಗಲಿ ಪೊಲೀಸಧಿಕಾರಿಗಳಾಗಲಿ ಈ ಘಟನೆ ಯನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳದಿರುವುದು ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಸಿದೆ ಎಂದು ಪಿಡಿಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಎಂ ಬಶೀರ್ ಅಹ್ಮದ್ ಮಂಜೇಶ್ವರ ನುಡಿದರು ಕಳೆದ ಒಂದು ವಾರಗಳಲ್ಲಿ ಉಪ್ಪಳ ಬೇಕೂರು ಹಾಗೂ ಕಡಂಬಾರು ಶಾಲಾ ವಿದ್ಯಾರ್ಥಿಗಲಿಬ್ಬರಿಗೆ ಈ ಪರಿಸ್ಥಿತಿ ಎದುರಾಗಿದೆ ಉಪ್ಪಳ ಬೇಕೂರಿನಲ್ಲಿ ವೃದ್ಧಯೊಂದಿಗೆ ವಿಜನ ಪ್ರದೇಶದಲ್ಲಿ ಮನೆಗೆ ನಡೆದು ಹೋಗುತ್ತಿದ್ದ ಬಾಲಿಕೆಯನ್ನು ಅಪಹರಿಸಲು ಪ್ರಯತ್ನ ನಡೆದಿತ್ತು ಸಿಸಿ ಕ್ಯಾಮೆರಾದಲ್ಲಿ ಅಪಹರಣಕ್ಕೆ ಬಳಸಿದ ವಾಹನವನ್ನು ಕಂಡು ಹಿಡಿಯಲಾಗಿತ್ತು ಆದರೂ ವಾಹನದ ಮಾಲಕ ಹಾಗೂ ವಾಹನದಲ್ಲಿ ಸಂಚರಿಸಿದ ಅನ್ಯ ರಾಜ್ಯ ಕೆಲಸಗಾರರನ್ನು ಕಸ್ಟಡಿಗೆ ತೆಗೆದುಕೊಳ್ಳದ ಪೊಲೀಸ್ ಇಲಾಖೆಯ ಕ್ರಮವು ವ್ಯಾಪಕವಾಗಿ ಜನರ ವಿರೋಧಕ್ಕೆ ಕಾರಣವಾಗಿದೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನ್ಯರಾಜ ಕೆಲಸಗಾರರನ್ನು ಪೋಷಿಸುವ ಗುತ್ತಿಗೆದಾರರು ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ಕೆಲವರು ಹೊಂದಿಕೊಂಡಿರುವ ಅನೈತಿಕ ಸಂಬಂಧ ವು ಇಂತಹ ಕೃತ್ಯಗಳು ವರ್ದಿಸಲು ಕಾರಣವಾಗಿರುವುದು ಚರ್ಚೆಗೆ ಗ್ರಾಸವಾಗಿರುತ್ತದೆ ಜಿಲ್ಲೆಯ ಸಂಪೂರ್ಣ ಪೊಲೀಸ್ ಇಲಾಖೆಯು ಜಿಲ್ಲೆಯನ್ನೇ ನಡುಗಿಸಿದ ಇನ್ನೊಂದು ಕೊಲೆ ಕೃತ್ಯದ ಆರೋಪಿಗಳ ಪತ್ತೆಯಲ್ಲಿ ಮುಳುಗಿರುವುದರಿಂದ ಮಕ್ಕಳ ಅಪಹರಣ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣದಿರುವುದು ಅಪಾಯಕರವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ ಮಕ್ಕಳ ಸಮಾಜ ಕಲ್ಯಾಣ ಇಲಾಖೆಯು ಬಾಲಾವಕಾಶ ಕಮಿಷನ್ ಉಪ್ಪಳ ಬೇಕೂರು ಹಾಗೂ ಕಡಂಬಾರ್ ನಲ್ಲಿ ನಡೆದ ಮಕ್ಕಳ ಅಪಹರಣ ಶ್ರಮವನ್ನು ಗಂಭೀರವಾಗಿ ಪರಿಗಣಿಸಿ ಸ್ವ ಇಚ್ಚಾ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಲು ತಯಾರಾಗಬೇಕೆಂದು ಪಿಡಿ ಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಎಂ ಬಷೀರ್ ಅಧಿಕೃತರನ್ನು ಪತ್ರಿಕ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ
ಮಕ್ಕಳನ್ನು ಅಪಹರಿಸುವ ತಂಡ ಜಿಲ್ಲೆಯಲ್ಲಿ ಸಜೀವ ಅಧಿಕೃತರ ಅನಾಸ್ತೆ ಆತಂಕಕಾರಿ; ಪಿಡಿಪಿ
Read Time:3 Minute, 7 Second


