ಕಡಂಬಾರು ಶಾಲೆಯಲ್ಲಿ ಸ -ಧೈರ್ಯ ಸಮಾರೋಪ ಕಾರ್ಯಕ್ರಮ

0 0
Read Time:1 Minute, 38 Second

ಕಡಂಬಾರು ಶಾಲೆಯಲ್ಲಿ
ಸ -ಧೈರ್ಯ ಸಮಾರೋಪ ಕಾರ್ಯಕ್ರಮ

ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ ಬಿ ಆರ್ ಸಿ ಮಂಜೇಶ್ವರ ದ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿ ಹೆಣ್ಣು ಮಕ್ಕಳಿಗಿರುವ ‘ಸ-ಧೈರ್ಯಂ’ ಕರಾಟೆ ತರಬೇತಿಯ ಸಮಾರೋಪ ಸಭೆ ಜರಗಿತು. ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಿತಾ ಕೆ.ಬಿ ಯವರು ವಹಿಸಿದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮ೦ಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್. ವಿ ಮಾತನಾಡಿದರು. ತರಬೇತಿ ನೀಡಿದಂತಹ ಕುಮಾರಿ ಶೈನಿ ದಾಸ್ ರವರನ್ನು
ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ
ಪಿ. ಟಿ.ಎ ಉಪಾಧ್ಯಕ್ಷರಾದ ಶ್ರೀ ವಿಜಯ ಭಂಡಾರಿ,
ಎಂ. ಪಿ. ಟಿ.ಎ ಅಧ್ಯಕ್ಷೆ ಶ್ರೀಮತಿ ರುಕ್ಸಾನ, ಎಸ್.ಎಂ.ಸಿ.ಉಪಾಧ್ಯಕ್ಷರಾದ ಶ್ರೀ ಮೈದೀನ್ , ಸಿ. ಆರ್ ಸಿ ಕೋರ್ಡಿನೇಟರ್ ಶ್ರೀಮತಿ ಮೋಹಿನಿ ಎಂ.ಎಚ್ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಶ್ರೀ ಮೂಸ ಕುಂಞ ಡಿ.. ಸ್ವಾಗತಿಸಿ, ಶ್ರೀಮತಿ ಗೋಪಿ .ವಿ. ವಂದಿಸಿದರು. ಶ್ರೀ ಇಸ್ಮಾಯಿಲ್ ಮಾಸ್ತರ್ ಕಾರ್ಯಕ್ರಮ ನಿರೂಪಣೆಗೈದರು.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!