ಮಂಜೇಶ್ವರ : ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ದುರಾಡಳಿತದಿಂದಾಗಿ ದೇಶ ತತ್ತರಿಸಿ ಹೋಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ನರೇಂದ್ರ ಮೋದಿ ಹಾಗು ಪಿನರಾಯ್ ಸರಕಾರಗಳ ತೆರಿಗೆ ದರೋಡೆಯಿಂದ ಆಗುತ್ತಿದೆ ಎಂದೂ, ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗಣಕ್ಕೇರುವುದರಿಂದ ರಾಜ್ಯವು ತತ್ತರಿಸಿ ಹೋಗಿದೆ ಎಂದು ಕೆ,ಪಿ,ಸಿ,ಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ, ನೀಲಕಂಠನ್ ರವರು ಹೇಳಿದರು, ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹೊಸಂಗಡಿ ಚೆಕ್ ಪೋಸ್ಟ್ ಬಳಿಯ ಪೆಟ್ರೋಲ್ ಪಂಪ್ ಮುಂಬಾಗದಲ್ಲಿ ನಡೆದ ಪ್ರತಿಭಟನೆಯುನ್ನು ಉದ್ಘಾಟಿಸಿ ಮಾತನಾಡಿದರು,
ಈ ದೇಶದಿಂದ ಮೋದಿ ಆಡಳಿತವನ್ನು ಕಿತ್ತೆಸೆಯುವ ಮೂಲಕ ದೇಶವನ್ನು ರಕ್ಷಿಸುವ ಕೆಲಸ ಆಗಲೇಬೇಕಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ,ಎಮ್,ಕೆ. ಮೊಹಮ್ಮದ್ ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಂಕಬೈಲು ಸತೀಶ ಅಡಪ್ಪ, ಸತ್ಯನ್ ಉಪ್ಪಳ, ವಸಂತ್ ರಾಜ್ ಶೆಟ್ಟಿ, ಶಾಫಿ ಕಡಂಬಾರ್, ಸುಕುಮಾರ್ ಶೆಟ್ಟಿ, ಬ್ಲಾಕ್ ಕಾರ್ಯದರ್ಶಿಗಳಾದ ಚಂದ್ರಶೇಖರ ಶೆಟ್ಟಿ ಬೆಜ್ಜ, ಅಲ್ಮೇಡ ಡಿಸೋಜ, ಅಜೀಜ್ ಕಲ್ಲೂರು, ನಾಗೇಶ್ ಮಂಜೇಶ್ವರ್, ಮೊಹಮ್ಮದ್ ಬೆಜ್ಜ, ಇಬ್ರಾಹಿಂ ಕುಂತೂರು, ಮೆಹಮೂದ್ ಕೆದುಂಬಾಡಿ, ಮುಖಂಡರುಗಳಾದ ಉಮ್ಮರ್ ಬೋರ್ಕಳ, ಮಜಾಲ್ ಮಮ್ಮದ್ ಖಲೀಲ್ ಬಜಾಲ್, ಮನ್ಸೂರ್ ಪೊಸೋಟ್, ಇಕ್ಬಾಲ್ ಬಿಳಿಯಾರ್, ಇರ್ಷಾದ್ ಮಂಜೇಶ್ವರ್, ಸಮದ್ ಕೆದಕಾರ್, ಪ್ರದೀಪ್ ಶೆಟ್ಟಿ, ಉಮ್ಮರ್ ಬೆಜ್ಜ, ರಾಜೇಶ್ ನಾಯಕ್, ಹನೀಫ್ ಬೆಜ್ಜ, ನವೀನ್ ರಾಜ್, ಮುಂತಾದವರು ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ದಿವಾಕರ s j ಸ್ವಾಗತಿಸಿ ಬಾಬು ಬಂದ್ಯೋಡ್ ವಂದಿಸಿದರು

ತೆರಿಗೆ ದರೋಡೆಯಲ್ಲಿ ಕೇಂದ್ರದೊಂದಿಗೆ ರಾಜ್ಯಸರ್ಕಾರದ ಪಾಲೂ ಇದೆ; ಕೆ. ನೀಲಕಂಠನ್
Read Time:2 Minute, 18 Second