ದುಬೈನಿಂದ ಕೇರಳದ ಕೋಳಿಕ್ಕೋಡ್ ಗೆ ಬರುತ್ತಿದ್ದ್ ಏರ್ ಇಂಡಿಯಾದ  ವಿಮಾನವು  ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ

ದುಬೈನಿಂದ ಕೇರಳದ ಕೋಳಿಕ್ಕೋಡ್ ಗೆ ಬರುತ್ತಿದ್ದ್ ಏರ್ ಇಂಡಿಯಾದ ವಿಮಾನವು ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ

0 0
Read Time:1 Minute, 40 Second

ಕೋಳಿಕ್ಕೋಡ್, ಆ.7: ದುಬೈನಿಂದ ಕೇರಳದ ಕೋಳಿಕ್ಕೋಡ್ ಗೆ ಬರುತ್ತಿದ್ದ್ ಏರ್ ಇಂಡಿಯಾದ IX1344 ವಿಮಾನವು ಶುಕ್ರವಾರ ಸಂಜೆ 7.45ರ ವೇಳೆಗೆ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ರನ್ ವೇ ಯಿಂದ ಜಾರಿ ಹಳ್ಳಕ್ಕೆ ಬಿದ್ದು ವಿಮಾನ ಎರಡು ಭಾಗವಾಗಿದೆ.
ವಿಮಾನದಲ್ಲಿ 174 ಪ್ರಯಾಣಿಕರು, 10 ಮಂದಿ ಹಸುಳೆಗಳು, 2 ಪೈಲಟ್, 5 ಕ್ಯಾಬಿನ್ ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ. ಓರ್ವ ಪೈಲಟ್ ದೀಪರ್ ಸಾಥೆ ಎಂಬುವರು ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ದುಬೈನಿಂದ ಕಲ್ಲಿಕೋಟೆಗೆ ಬರುತ್ತಿದ್ದ ವಿಮಾನ ದುರಂತದ ಸಂತ್ರಸ್ತರಿಗೆ ಸಹಾಯವಾಣಿ ಸಂಖ್ಯೆ ಇಲ್ಲಿದೆ:
056 546 3903, 0543090572, 0543090572, 0543090575, 0483-2719493
ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿದೆ, ಆದರೆ ಬೆಂಕಿ ಹೊತ್ತಿಕೊಂಡಿಲ್ಲ, ಭಾರಿ ಮಳೆ ನಡುವೆ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿ ಶಾಮಕ ದಳ ಸಿಬ್ಬಂದಿ ಇದ್ದಾರೆ ರನ್ವೇ 10ರಲ್ಲಿ ಸಾಗುವಾಗ ದುರಂತ ಸಂಭವಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮಾಧ್ಯಮ ವಕ್ತಾರರಾದ ರಾಜೀವ್ ಜೈನ್ ಹೇಳಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!